ಪುರಾತನ ಕಾಲದಿಂದಲೂ ನಮ್ಮ ಧರ್ಮಗಳಲ್ಲಿ, ಪ್ರಾಣಿಪಕ್ಷಿಗಳಿಕೆ ವಿಷೇಶ ಸ್ಥಾನವಿದೆ. ಸಾಮಾನ್ಯ ಯಾವುದಾದರೂ ದೇವಾನುದೆವತೆಗಳ ವಾಹನವಾಗಿಯೋ ಅಥವ ಇನ್ನಿತರ ದೇವರುಗಳ ಸಹಾಯಕ ಕಾರ್ಯಗಳಲ್ಲಿನ ಉಲ್ಲೆಖಗಳಿವೆ. ಗರುಡವನ್ನು ಕೂಡ ಮಹಾವಿಷ್ಣುವಿನ ವಾಹನವಾಗಿ ಪ್ರತಿಬಿಂಬಿಸಲಾಗಿದೆ. ಬಹುಶಃ ಪ್ರಾಣಿಪಕ್ಷಿಗಳಿಗೆ ಸಲ್ಲಬೇಕಾದ ಗೌರವ, ಭದ್ರತೆ, ಮತ್ತು ಅವುಗಳ ಮಹತ್ವವನ್ನರಿತ ನಮ್ಮ ಪೂರ್ವಿಕರು ಅವುಗಳ ಸಂತತಿಯ ಉಳಿವಿಗಾಗಿ ಹಾಗೆ ಬಿಂಬಿಸಿರಬಹುದು... ಹಾವನ್ನು ದೇವರೆಂದಿಲ್ಲದಿದ್ದರೆ ಸಿಕ್ಕ ಸಿಕ್ಕ ಕಡೆ ಹೊಡೆದು ಅದರ ಸಂತತಿಗೇ ಕಂಟಕ ಬರುತ್ತಿತ್ತೊ ಏನೋ? ಈಗಲೂ ನಾಗರಹಾವನ್ನು ದೇವರೆಂದು ಭಯದಿಂದ ಬಿಟ್ಟುಬಿಡುವುದನ್ನು ನಾವು ನೋಡಿರಬಹುದು. ಮನುಷ್ಯ ದೇವರಿಗೆ ಬಿಟ್ಟರೆ ಇನ್ಯಾರಿಗೆ ಹೆದರುತ್ತಾನೆ? ಕೊನೇ ಪಕ್ಷ ದೇವರ ಭಯದಿಂದಾದರು ಅವುಗಳನ್ನು ತಮ್ಮ ಪಾಡಿಗೆ ಬಿಟ್ಟರೆ ಸಾಕುಯೆನ್ನುವ ಉದ್ದೇಶವಿರಬಹುದು ಅಲ್ವ? ನನ್ನ ಅಭಿಪ್ರಾಯ, ನೀವೂ ಒಮ್ಮೆ ಯೋಚಿಸಿ... ಕಾಗೆಯಿಂದ ಹಿಡಿದು ಗೂಬೆ, ನವಿಲು ಇತ್ಯಾದಿ ಪಕ್ಷಿಗಳು, ಹುಲಿ ಸಿಂಹ ಆನೆ ಕೋಣ ಇತ್ಯಾದಿಗಳು ಯಾವುದಾದರೂ ದೇವರ ವಾಹನ ಅಲ್ಲವಾ?