ಸರ್ಪಗಳ ಪಾಲಿಗೆ ಸಿಂಹ ಸ್ವಪ್ನ! ಪನ್ನಾಗರಿಗೆ ಸಾಮಾನ್ಯ ತಿನ್ನಲು ಹಾವುಗಳೇ ಬೇಕು. ಅದು ಎಂಥಾ ವಿಷಸರ್ಪವಾದರೂ ಸರಿ. ನಾಗರಹಾವು, ಮಂಡಲದಂತಹ ದೊಡ್ಡ ವಿಷಪೂರಿತ ಹಾವುಗಳನ್ನೇ ಬಿಡದೆ ಸೆಣಸಾಡಿ ನುಂಗಿಬಿಡುತ್ತದೆ. ಹಾಗಂತ ಹಾವುಸಾಮಾನ್ಯ ಅಲ್ಲ, ಹಕ್ಕಿಗಳ ಗೂಡಿಗೆ ಲಗ್ಗೆಯಿಟ್ಟು ಮೊಟ್ಟೆಗಳನ್ನೆಲಾ ತಿಂದು ತೇಗುತ್ತದೆ. ಪ್ರಕೃತಿಯಲ್ಲಿ ಹಾವುಗಳಿಗೆ ಹಕ್ಕಿಗಳು ವೈರಿ, ಹಕ್ಕಿಗಳಿಗೆ ಹಾವುಗಳು ವೈರಿ. ಯಾಮಾರಿದರೆ ಒಂದನ್ನು ಒಂದು ಮುಗಿಸಿಯೇ ಬೆಡುತ್ತದೆ.