1991ರಲ್ಲಿ ಕೊನೆಬಾರಿ ಕೋಡಿ(overflow) ಹೋದದ್ದು. ಅನಂತರ 1999ರಲ್ಲಿ ಸುಮಾರು 5-6ಅಡಿ ಕಡಿಮೆ ಪೂರ್ತಿ ಕೆರೆತುಂಬಲು. ಎರಡು ದಶಕಗಳೇ ಕಳೆಯಿತು ನೀರೇ ಇಲ್ಲ. ಇದು ಅಂತಿಂತ ಕೆರೆಯಲ್ಲ, ಸುಮಾರು 3200 ಎಕರೆ, ಹೆಚ್ಚು ಕಡಿಮೆ ಹತ್ತು ಕಿಲೋಮಿಟರ್ ಉದ್ದ ಮತ್ತು 2-3 ಕಿಲೋಮೀಟರ್ ಅಗಲ, ಅಬ್ಬ ಇದರ ಹೊಟ್ಟೆ ತುಂಬಬೇಕಾದರೆ ಭಾರಿ ಮಳೆಯೇ ಬೇಕು!
ಸುತ್ತಮುತ್ತಲ ಹಲವಾರು ಹಳ್ಳಿಗಳ ಹಾಗು ಹೊಸಕೋಟೆ ಪಟ್ಟಣದ ಜೀವನಾಡಿ. ಬೆಂಗಳೂರು ಸುತ್ತಮುತ್ತಲಿನ ಬಹುಶಃ ದೊಡ್ಡಕೆರೆ ಇದೇ ಇರಬೇಕು. ಕರ್ನಾಟಕ ರಾಜ್ಯದ ಮೊದಲ ಹತ್ತು ವಿಷೇಶ ಕೆರೆಗಳ ಪೈಕಿ ಇದೂ ಒಂದು.
ಸುಮಾರು 186 ಪ್ರಭೇದದ ಸಾವಿರಾರು ಪಕ್ಷಿಗಳ ಆಶ್ರಯ. ಲೆಕ್ಕವಿಲ್ಲದಷ್ಟು ಸರಿಸೃಪ, ಕ್ರಿಮಿ ಕೀಟಗಳ ಮನೆಯಿದು. ಆಳಿವಿನಂಚಿನಲ್ಲಿಗರುವ (endangered) ಹಕ್ಕಿಗಳು, ದೇಶ ವಿದೇಶದಿಂದ ವಲಸೆ ಬಂದ ಹಕ್ಕಿ ಜೊತೆಗೆ ಸ್ಥಳವಂದಿಗ ಹಕ್ಕಿಗಳಿಗೆ ಪಾಲನೆ ಪೋಶಣೆ ನೀಡಿ ಸಾಕಿ ಸಲಹುತ್ತಿದೆ
ನನ್ನ ಹುಟ್ಟೂರು ಹೊಸಕೊಟೆಯಾದ ಕಾರಣ ನನ್ನ ಬಾಲ್ಯಕ್ಕೂ ಈ ಕೆರೆಗೂ ತುಂಬಾ ನಂಟು! ರಜಾಬಂತೆಂದರೆ ಕೆರೆಯಲ್ಲಿ ಕ್ರಿಕೆಟ್, ಹರಟೆ, ಸೈಕಲ್ ಸವಾರಿ, ಇತ್ಯಾದಿ. ಪರೀಕ್ಷೆ ಬಂತೆಂದರೆ ಕೆರೆ ಕಟ್ಟೆಯ ಪ್ರಶಾಂತ ವಾತವರ್ಣದಲ್ಲಿ ಓದು. ಮನೆಯಲ್ಲಿ ಬಾರದ ಏಕಾಗ್ರತೆ ಇಲ್ಲಿ ಬರುತ್ತಿತ್ತು. ಈಗಂತು ಊರಿಗೆ ಹೋದಾಗಲೆಲ್ಲಾ ಕೆರೆಗೆ 4-5 ತಾಸುಗಳ ಒಂದು visit ಗ್ಯಾರೆಂಟಿ, ಕಾರಣ ಅಲ್ಲಿರುವ ಹಕ್ಕಿಗಳು.