Thursday 15 June 2017

White throated kingfisher

White Throated Kingfisher

ನಮ್ಮ ಹೊಸಕೋಟೆ ಕೆರೆ, ಅಲ್ಲಿನ ಪ್ರಕೃತಿ, ಜೀವಿಗಳು ಅದಂತೂ ಕುತೂಹಲಗಳ ದೊಡ್ಡ ಭಂಡಾರವೇ ಸರಿ! ಸ್ವಲ್ಪ ಒಳಹೊಕ್ಕಿ ಅಧ್ಯಾಯನ ನಡೆಸಿದಾಗ ಸಿಕ್ಕಿದ್ದು 220ಕ್ಕೂ ಮೀರಿದ ಪಕ್ಷಿಪ್ರಭೇದದ ಸಾವಿರಾರು ಹಕ್ಕಿಗಳು, ಸುಮಾರು ಹತ್ತು ಜಾತಿಯ ಸಸ್ತನಿಗಳು, ಒಂದು ಇಪ್ಪತ್ತು ವಿಧವಾದ ಸರ್ಪಗಳು, ಹೆಚ್ಚು ಕಡಿಮೆ 17 ತರಹದ ಕಪ್ಪೆ, 90 ಬಗೆಯ ಸಾವಿರಾರು ಚಿಟ್ಟೆ, ಗಿಡಗಂಟೆಗಳು, ಅಸಂಖ್ಯಾತ ಕ್ರಿಮಿ ಕೀಟಗಳು.
ಪಟ್ಟಣದ ಅರವತ್ತು ಸಾವಿರ ಜನಸಂಖ್ಯೆ ಹಾಗು ಸುತ್ತಲಿನ ಹಳ್ಳಿಗಳು, ಅದರ ಜೊತೆಗೆ ಕೆರೆಯ ಜೀವವೈವಿಧ್ಯತೆಯ ನೀರಿನ
ಒಂದೇ ಆಸರೆ! ರಾಜ್ಯದ ದೊಡ್ಡ ಹತ್ತುಕೆರೆಗಳ ಪಟ್ಟಿಯಲ್ಲಿರುವ ಕೆರೆ. ಹೊಸಕೋಟೆ ನಾಗರಿಕರು ಹೆಮ್ಮೆಪಡುವ ವಿಷಯ.
ನಮ್ಮ ಕೆರೆಯಲ್ಲಿ ಎಣಿಕೆಗೆ ಸಿಗದಷ್ಟು ಕುತೂಹಲ ಕೆರಳಿಸುವ ವಿಷಯಗಳಿವೆ! ಇಲ್ಲೊಂದು ಅದರ ಸಣ್ಣ ಝಲಕ್ಕಿದೆ, ಅದೇ ಪೆರಿಗ್ರೇನ್ ಫಾಲ್ಕಂನ್ peregrine falcon (ದೊಡ್ಡಚಾಣ) ಹಕ್ಕಿ ! ಪ್ರತೀ ಚಳಿಗಾಲದಂದು ಇಲ್ಲಿಗೆ ದೂರದ ದೇಶದಿಂದ ವಲಸೆಬಂದು ಕೆಲತಿಂಗಳಕಾಲ ವಾಸವಿದ್ದು ಮತ್ತೆ ಅದರ ದೇಶಕ್ಕೆ ವಾಪಸ್ಸು ತೆರಳುತ್ತದೆ.

ಇದೊಂದು ಸಾಮಾನ್ಯ ಹಕ್ಕಿಯಲ್ಲ, ಕಾಣಸಿಗುವುದೇ ಕಷ್ಟ. ನಮ್ಮಲ್ಲಿಗೆ ಬರುವ ಚಳಿಗಾಲದ ವಲಸಿಗ ಅಥಿತಿ. ಇದರಲ್ಲೇನಿದೆ ಅಂಥ ವಿಷೇಶ ? ಮೈ ರೋಮಾಂಚನಮಾಡುವ ವಿಚಾರ ಇದೆ! ಇದೊಂದು ಪ್ರಾಣಿ ಪ್ರಪಂಚದ ಫೈಟರ್ ಜೆಟ್ (fighter jet) ಅಥವ ಎರ್ ಟು ಎರ್ ಕ್ಷಿಪಣಿಯೆಂದರೆ ತಪ್ಪಿಲ್ಲ. ದೊಡ್ಡ ಚಾಣ, ಪಕ್ಷಿ ಹಾಗು ಪ್ರಾಣಿ ಪ್ರಪಂಚದ ಅತ್ಯಂತ ವೇಗವಾಗಿ ಕ್ರಮಿಸಬಲ್ಲ ಜೀವಿ. ಹಾಗೆದ್ದರೆ ಇದರ ಗರಿಷ್ಟ ವೇಗ ಎಷ್ಟಂತೀರ? ಬರೊಬ್ಬರಿ 380 ಕಿಲೋಮೀಟರ್ ಗಂಟೆಗೆ ಹಾರಬಲ್ಲ ಸಾಮರ್ಥ್ಯ ದಾಖಲಾಗಿದೆ. ತನ್ನ ಬೇಟೆಯನ್ನು ಗಾಳಿಯಲ್ಲೇ ಆಕ್ರಮಣ ಮಾಡಿ (ಗಂಟೆಗೆ ಸುಮಾರು 320 ಕಿಲೋಮೀಟರ್ ವೇಗವಾಗಿ ಡೈವ್ ಹಾಕಿ ತನ್ನ ಬಲವಾದ ಕಾಲು ಮತ್ತು ಉಗುರು ಪಂಜದಿಂದ ಹೊಡೆದುರುಳಿಸಿ), ಬೇಟೆ ಕೆಳಗೆ ಬಿದ್ದನಂತರ ಸಿಗಿದು ತಿನ್ನುತ್ತದೆ.
ಮತ್ತೊಂದು ಗಮನಿಸಬೇಕಾದ ವಿಶೇಷ ಇದೆ, ದೊಡ್ಡ ಚಾಣದ ಮೂಗು ! ಅಷ್ಟೊಂದು ವೇಗದಲ್ಲಿ ಹಾರಬೇಕಾದರೆ ಉಸಿರಾಟ? ನಾವು ಮೋಟಾರು ಬೈಕ್ನಲ್ಲಿ ಗಂಟೆಗೆ 80-90 ಕಿಲೋಮಿಟರ್ ವೇಗದಲ್ಲಿ ಹೋಗುವಾಗ ಉಸಿರಾಡಲು ಕಷ್ಟ ಅಲ್ವ? ತೀವ್ರವಾದ ವಾಯುವೇಗದಿಂದ ಉಸಿರಾಡಲು ತೊಂದರೆಯಾಗಿಬಿಡುತ್ತದೆ. ಚಾಣದ ಮೂಗಿನ ಮೂಳೆಗಳು ಶಂಕುವಿನಾಕಾರದ ರಚನೆ ನೀಡಿ ಗಾಳಿಯವೇಗವನ್ನು ತಗ್ಗಿಸಿ ಉಸಿರಾಡುವ ಹಾಗೆ ರೂಪುಗೊಂಡಿರುತ್ತದೆ.

ದೊಡ್ಡ ಚಾಣಕ್ಕೂ, ಕೆಲವು ಸೂಪರ್ಸಾನಿಕ್ ಫೈಟರ್ ಜೆಟ್ಗೂ ( ಉದಾ: ಅಮೇರಿಕಾದ ಎಫ್ 22 ರಾಪ್ಟರ್) ನಿಕಟ ಸಂಭಂದ ಇದೆ, ಇಂಜಿನಿಯರ್ಗಳು ದೊಡ್ಡ ಚಾಣದ ಮೂಗಿನ ಅಧ್ಯಾಯನ ಮಾಡಿ, ಕೆಲವು ಪೈಟರ್ ಜೆಟ್ಗಳ ಎರ್ ಇನ್ಟೇಕ್ (air intake system) ವಿನ್ಯಾಸಮಾಡಿರುವುದುಂಟು. ಇಲ್ಲವಾದಲ್ಲಿ ಸೂಪರ್ಸಾನಿಕ್ ವೇಗದಲ್ಲಿ ಹಾರುವಾಗ ಅತಿಯಾದ ವಾಯುವೇಗದಿಂದ ಜೆಟ್ ಇಂಜಿನ್ ಛೊಕ್ ಆಗುವ ಸಮಸ್ಯೆ ಎದುರಾಗುತ್ತಿತ್ತು.

ಈಗಲೂ ಚಾಣಗಳ ಮೇಲೆ ಸಂಶೋಧನೆಗಳು ನಡೆಯುತ್ತಿದೆ.