Sunday, 8 May 2016

Indian Jackal

ಎಲ್ಲಿ ಯಾವಾಗ ಏನು ನೋಡಲು ಫೋಟೊ ತೆಗೆಯಲು ಸಿಕ್ಕತ್ತೋ ? ಹಾಗೆ ಒಂದು ಹೊಸ ಜಾಗಕ್ಕೆ ಹೋದಾಗ ಗುಳ್ಳೆನರಿ ದರುಶನ! ತುಂಬಾ ಬುದ್ದಿವಂತ ಹಾಗು ಭಯಸ್ತ ಪ್ರಾಣಿ, ನೋಡಲು ಬೆಳಗ್ಗಿನ ಜಾವ ಸೂರ್ಯಹುಟ್ಟುವ ಸಮಯದಲ್ಲಿ (ಅಥವ ಮೊದಲು) ಸಿಗುವ ಸಾಧ್ಯತೆ ಮಾತ್ರ...

ಫೋಟೊ ತೆಗೆದ ಹಿಂದಿನ ರಾತ್ರಿ ಭರ್ಜರಿ ಮಳೆ ಬಿದ್ದಿತ್ತು, ತಂಪಾದ ವಾತಾವರ್ಣ. ಬೆಳಿಗ್ಗೆ ಕ್ಯಾಮೆರಾದೊಂದಿಗೆ ಹೊಸ ಜಾಗ ಹುಡುಕಿ (habitat explore) ಹೋಗಿದ್ದು. ಕಾಗೆಗಳ ಹಿಂಡೊಂದು ಕರ್ಕಶವಾಗಿ ಕೂಗುತ್ತಿದ್ದವು (ಕಾಗೆಗಳು ಬೇರೆ ಹಿಂಸ್ರಪಕ್ಷಿ, ಅಥವ ಪ್ರಾಣಿಗಳ ಇರುವಿಕೆಯನ್ನುಸಹಿಸುವುದಿಲ್ಲ, ಅದು ನಮಗೆ ಬಲವಾದ ಸೂಚನೆ), ಒಂದು ಕ್ಷಣ ಏನೋ ನಾಯಿರೂಪದ್ದು ಓಡಿಬಂದಂತೆ! ಆಕಡೆ ತಿರುಗಿದರೆ ಅದು ಗುಳ್ಳೆನರಿ! ಕಾಗೆಗಳು ಅದನ್ನ ಅಟ್ಟಾಡಿಸುತ್ತಿತ್ತು. ನನ್ನಕಡೆ ಸಣ್ಣನೋಟ ಹಾಯಿಸಿ ಪೊದೆಯೊಳಗೆ ಮರೆಯಾಗಿ ಹೋಯಿತು...



Show Comments: OR

No comments:

Post a Comment