ನಮ್ಮ ಬೆಂಗ್ಳೂರು ಮತ್ತೆ ಸುತ್ತಮುತ್ತ ಕೆರೆಗಳಲ್ಲಿ ಕೆಲವು ಸಾವಿರಾರು ಮುದ್ದು ಮರಿಗಳು ಬರುತ್ವೆ.... ಅವೇ ರಾಟವಾಳಗಳು....ಅದರಲ್ಲು ಅಪ್ಪಟ ಬಂಗಾರಿಅಂದ್ರೆ ಕೆಂಪು.... ಸದಾಕಾಲ ಗುಂಪು, ಹುಲ್ಲು ಜೊಂಡುಗಳ ನಡುವೆಯೇ. ನೋಡಬೇಕೆಂದರೆ ಹಾರುವಾಗ ನೋಡು... ಫೋಟೋತೆಗೀತೀನಿ ಬಾ, ಗಂಟೆಗಟ್ಟಲೆ ಕೂತಲ್ಲೆ ಕೂತು ಕಾಯುತ್ತೇನೆಯೆಂದರೆ ಒಲ್ಲೆ. ಅಬ್ಬ ಎಂಥಾ ಕೆಂಪು ಜೊತೆಗೆ ಬಿಳಿಚುಕ್ಕೆ ಬೇರೆ ಯಾರೋಬಿಡಿಸಿದಂತೆ. ಗಾತ್ರ ಮಾತ್ರ ಹೆಬ್ಬೆರಳಿಗಿಂತ ಸ್ವಲ್ಪ ದೊಡ್ಡ... ತೀರಸೂಕ್ಷ್ಮ ಸ್ವಲ್ಪ ಸುಳಿವಾದರೆ ಒಟ್ಟೊಟ್ಟಿಗೆ ಪುರ್.... ತಿನ್ನಲು ಹುಲ್ಲು ಇತ್ಯಾದಿ ಬೀಜಗಳು, ಬೀಜ ಪ್ರಸರಣದಲ್ಲಿ ಪ್ರಮುಖಪಾತ್ರ....ಈ ನೆತ್ತರುಕುಡಿದ ಕೆಂಪು ಸಂತಾನೋತ್ಪತ್ತಿ ಕಾಲದಲ್ಲಿ ಮಾತ್ರ.. "ಕೆಂಪಾದವೋ ಎಲ್ಲ ಕೆಂಪಾದವೋ, ರೆಕ್ಕೆಪುಕ್ಕಗಳೆಲ್ಲಾ ಕೆಂಪಾದವೋ ಈ ಎಲ್ಲಿಂದಲೋ ಬಂದವರಿಗೆ....
ನಾಲ್ಕು ವರ್ಷ ಕಾಯಬೇಕಾಯಿತು ಈ ಫೋಟೊತೆಗೆಯಲು..
ನಾಲ್ಕು ವರ್ಷ ಕಾಯಬೇಕಾಯಿತು ಈ ಫೋಟೊತೆಗೆಯಲು..