Monday, 27 June 2016

Wednesday, 1 June 2016

Baya weaver (ಗೀಜಗ)

ಗುಬ್ಬಿ ಗಾತ್ರದ ಗೀಜಗ ಪಕ್ಷಿ ಪ್ರಪಂಚದ ಪ್ರಮುಖ ವಾಸ್ತುಶಿಲ್ಪಿಗಳಲ್ಲೊಂದು. ಗಿಜಗ ಕಟ್ಟಿದ ಗೂಡನ್ನು ಬಹುಶಃ ಎಲ್ಲರು ಕಂಡಿರಬಹುದು. ಕೆರೆ, ನಾಲೆ, ನದಿ ತೀರದಲ್ಲಿ ಗೂಡುಗಳನ್ನು ಕಟ್ಟುವುದುಂಟು.

ಮನುಷ್ಯ ಗೀಜಗ ಪಕ್ಷಿ ಗೂಡು ನೇಯುವ ಪರಿ ನೋಡಿ ತಾನು ಬಟ್ಟೆ ನೇಯುವ ಕಲೆಯನ್ನು ಕಲಿತಿರಬಹುದೆಂದು ಎಲ್ಲೋ ಓದಿದ ನೆನಪು. ಸುಮಾರು ಕಷ್ಟಪಟ್ಟು ಹುಲ್ಲನ್ನು ಆಯ್ದುತಂದು ತಾಗೂಡುಕಟ್ಟಿದ ಗಂಡು ಗೀಜಗ, ಹೆಣ್ಣುಪಕ್ಷಿಯನ್ನು ಕರೆದು ತೋರಿಸುತ್ತದೆ. ಆ ತಪಾಸಣೆಯ ನಂತರ ಹೆಣ್ಣು ಗೀಜಗಕ್ಕೆ ಗೂಡು ಒಪ್ಪಿಗೆಯಾದಲ್ಲಿ ಮುಂದೆ ಮೊಟ್ಟೆ ಮರಿ ಮಾತು.

ಇನ್ನೊಂದು ವಿಷೇಷ ಇದೆ - ಬುದ್ದಿವಂತ ಗೀಜಗ, ಗೂಡಿನ ಮರಿಗೆ ಹಾಗು ಗೂಡನ್ನು ರಾತ್ರಿ ಸಮಯ ಬೆಳಕಿನಿಂದ ಬೆಳಗುವುದಕ್ಕೆ ಮಿಂಚುಹುಳುವನ್ನು ಹಿಡಿದು ತನ್ನ ಗೂಡಿನಲ್ಲಿ ಬಂಧಿಸುವುದುಂಟಂತೆ ! ಪಕ್ಷಿಗಳು ಎಂದಿಗೂ ವಿಸ್ಮಯ....

Baya weaver, the sparrow sized bird is one of the chief architect of avian kingdom. We all might have seen the nests built be these birds. Usually they build nests adjacent to banks of river, canals and rivers.

Probably the man would have picked up the skill of weaving of cloths by looking at the way these birds construct the nest by weaving the carefully picked up nesting material - usually grass blades. Once the nest weaving is done by male bird, it offers inspection to the female weaver bird ! Once the female is satisfied with the nest quality then only breeding otherwise no..

One more thing - Bayaweaver would catch fireflies and held them captive in their nests for lighting up the nest during night...! How beautiful and intelligent is these birds ?