Thursday, 17 December 2015

Brown fish owl

ಪುಟ್ಟಾ ಜಾಸ್ತಿ ಹಠ ಮಾಡಿದ್ರೆ ಗುಮ್ಮ ಬರ್ತಾನೆ ಹುಶಾರ್, ಅಂತ ತಾಯಂದಿರು ಮಕ್ಕಳಿಗೆ ಹೆದರಿಸಿ ಸುಮ್ಮನಾಗಿಸುವ ಪರಿ ಯಾರಿಗೆ ಗೊತ್ತಿಲ್ಲ? ಹೌದು, ಅದೇ ಗುಮ್ಮನನ್ನ ಹುಡುಕಿಕೊಂಡು ಹೋಗಿ ಸಿಕ್ಕರೆ? ಬೊಂಬಾಟ್ ಅಲ್ವ?

ಕಂದು ಮೀನು ಗುಮ್ಮ - ಮೀನು, ಸಣ್ಣ ಹಾವು, ಕಪ್ಪೆ, ಇತರೆ ಸರಿಸೃಪಗಳು, ಜಲಚರ ಕೀಟಗಳಿಗೆ ಇದು ಗುಮ್ಮನೇ ಸರಿ. ಒಮ್ಮೊಮ್ಮೆ ಕೆಲವು ಹಕ್ಕಿ, ಇಲಿ ಹೆಗ್ಗಣಗಳು, ಮೊಲ ಇತ್ಯಾದಿ ಕೂಡ ಇದರ ಹೊಟ್ಟೆ ಸೇರುವುದುಂಟು.

ಮೂಕಾಂಬಿಕೆಯ ಮಡಿಲ ವಿಸ್ಮಯ ಪ್ರಕೃತಿ, ಅಂದು ರಾತ್ರಿ ಫಾರೆಸ್ಟ್ರತಲೆ ತಿಂದು ಮೂಕಾಂಬಿಕ ಅಭಯಾರಣ್ಯದಲ್ಲಿ ತಂಗಲು ವ್ಯವಸ್ಥೆ ಮಾಡಿಸಿ, ದಿನವೆಲ್ಲಾ ಹಕ್ಕಿಗಳೊಡನೆ ಕಾಲ ಕಳೆದದ್ದು. ಅಲ್ಲಿದ್ದ ಸೌಪರ್ಣಿಕ ನದಿಯ ದಂಡೆ ನೋಡಿದ ನನಗೆ, ಅದು ಮೀನು ಗುಮ್ಮದ ವಾಸ್ತವಕ್ಕೆ ಹೇಳಿ ಮಾಡಿಸಿದ ಜಾಗವೆಂಬುದು ತಿಳಿಯಿತು. ಮಾರನೆ ದಿನ ಮುಂಜಾನೆ ಸ್ಮಿತಾ, ತಾನು ನದಿಹತ್ತಿರ ಕುಳಿತಿರುವಾಗ ಯಾವುದೋ ಒಂದು ದೊಡ್ಡ ಆಕಾರ ಮರದಿಂದ ಹಾರಿ ಇನ್ನೊಂದು ಮರಕ್ಕೆ ಹೋದಂತಾಯಿತು. ತಕ್ಷಣ ದೊಡ್ಡ ಹದ್ದು, ನೋಡಿ ಎಂದು ನನ್ನನ್ನು ಕರೆದಾಗ, ನನಗೆ ‍ಖುಷಿ - ಕರಾರುವಕ್ಕಾಗಿ ಅದು ಮೀನು ಗುಮ್ಮನೆಂದು.
ಆದರೆ ಮತ್ತೆ ಕಾಣುವುದು ಸುಲಭದ ಮಾತಲ್ಲ ಕಾರಣ ಅದರ ಮರೆಮಾಡಿಕೆ ಬಣ್ಣ! ಸುಮಾರು ೧೫ ನಿಮಿಷ ಶೋಧಿಸಿದಾಗ ಕಂಡದ್ದು ಹೀಗೆ.

ಸುಮಾರು ಮೂರುವರೆ ವರುಶದ ನಂತರ ಸಿಕ್ಕಿದ್ದು, ನಾ ಕಂಡ ಮೊದಲ ಗೂಬೆ ಇದು!

Brown fish owl (ಕಂದು ಮೀನು ಗುಮ್ಮ)/ Dec 2015


Tuesday, 15 December 2015

Indian Peafoul

ಕನ್ನಡ ನಾಡಿನ ಭಾಗಿರತಿ ಎಂದೇ ಕರೆಯಲ್ಪಡುವ ಶರಾವತಿ ನದಿ, ಜೋಗ ಜಲಪಾತದ ಸುತ್ತಮುತ್ತ ಸೂರ್ಯಕಿರಣ ಸಹ ನೆಲ ತಲುಪದಂತಹ ದಟ್ಟ ಕಾನನ, ಶರಾವತಿಗೆ ಅಡ್ಡಲಾಗಿ ನಿರ್ಮಿಸಿರುವ ಲಿಂಗನಮಕ್ಕಿ ಅಣೆಕಟ್ಟು, ಅಸಂಖ್ಯಾತ ಜೀವರಾಶಿಗೆ ಆಶ್ರಯವಾಗಿರುವ ಶರಾವತಿ ಕಣಿವೆ ಅಭಯಾರಣ್ಯದ ಪ್ರಕೃತಿ ಸೊಬಗು ಅಬ್ಬ, ಈ ಪ್ರದೇಶ ಮನಸ್ಸಿಗೆ ಮುದ ನೀಡುವ ಸ್ವರ್ಗವೇ ಸರಿ!

ಹಾಗೆ ಜೀಪಿನಲ್ಲಿ ಶರಾವತಿ ಕಣಿವೆ ಒಳ ಹೊಕ್ಕಿ ಅಲೆದಾಡುತ್ತಿರುವಾಗ, ಕಾರ್ಗಲ್ ಹಳ್ಳಿ ಸಮೀಪ ಮುಸ್ಸಂಜೆ ವೇಳೆ, ನವಿಲುಗಳ ಗುಂಪೊಂದು ರಾಜಾರೋಷವಾಗಿ ಯಾರದ್ದೋ ಭತ್ತದ ಗದ್ದೆಯಲ್ಲಿ ಬಿಡಾರ ಹೂಡಿದ್ದವು. ಆ ಕ್ಷಣ ಕ್ಯಾಮರ ಕೈಲಿ ಸೆರೆಸಿಕ್ಕಿದ್ದು ಹೀಗೆ....

Indian Peafoul "The National Bird" - Sharavathi wild life santury, Dec 2015



Sunday, 13 December 2015

Scarlet minivet


Scarlet minivet (ಚಿತ್ರ ಪಕ್ಷಿ) male - Sharavathi valley wildlife santury, 08.12.2015 

ಬ್ಯಾಗ್ ತಗಲಾಕಿಕೊಂಡು, ಪ್ಲಾನ್ ಇಲ್ಲದೆ ಸಿಕ್ಕ ಸಿಕ್ಕ ಬಸ್ ಹತ್ತಿ ಸುತ್ತೋದು ಶಾಲ ದಿನದಿಂದಲು ಬಂದ ಹುಚ್ಚು, ಹೀಗೆ ಒಂದು ದಿನ ಡಿಸೆಂಬರ್ ೨೦೧೩ ದಾಂಡೇಲಿಗೆ ಎಲ್ಲಿಂದಲಿಂದಲೋ ಪ್ರವಾಸ, ಇದೇ ಚಿತ್ರ ಪಕ್ಷಿ ಒಂದೆರಡು ಕ್ಷಣ ಕಣ್ಣ ಮುಂದೆ ಬಂದು ಫೋಟೋಗೆ ಸೆರೆ ಸಿಕ್ಕದೆ ಪುರ್ರೆಂದು ಹಾರಿ ಹೋಗಿತ್ತು. ಅಂದು ಸಿಕ್ಕಿಲ್ಲ ಅಂತ ಸ್ವಲ್ಪ ನಿರಾಶೆ ಇತ್ತು, ಎರಡು ವರ್ಷ ಕಳೆದು ಫೋಟೋಗೆಸೆರೆ ಸಿಕ್ಕಿದ್ದು ಈ ಮುದ್ದು ಹಕ್ಕಿ, ಎಂಥಾ ಆನಂದ !!

ಹವ್ಯಾಸ ಬಿಡದೆ ಪ್ರಯತ್ನ ಪಟ್ಟಲ್ಲಿ ಇಂದಲ್ಲ ನಾಳೆ ಗ್ಯಾರೆಂಟಿ - ಆಕಾಶ ನೋಡಲು ನೂಕು ನುಗ್ಗಲೇಕೆ.

The fireball - such a beautiful creature is insectivorous found in canopies hunting small insects.