Monday 29 August 2016

Red munia

ನಮ್ಮ ಬೆಂಗ್ಳೂರು ಮತ್ತೆ ಸುತ್ತಮುತ್ತ ಕೆರೆಗಳಲ್ಲಿ ಕೆಲವು ಸಾವಿರಾರು ಮುದ್ದು ಮರಿಗಳು ಬರುತ್ವೆ.... ಅವೇ ರಾಟವಾಳಗಳು....ಅದರಲ್ಲು ಅಪ್ಪಟ ಬಂಗಾರಿಅಂದ್ರೆ ಕೆಂಪು.... ಸದಾಕಾಲ ಗುಂಪು, ಹುಲ್ಲು ಜೊಂಡುಗಳ ನಡುವೆಯೇ. ನೋಡಬೇಕೆಂದರೆ ಹಾರುವಾಗ ನೋಡು... ಫೋಟೋತೆಗೀತೀನಿ ಬಾ, ಗಂಟೆಗಟ್ಟಲೆ ಕೂತಲ್ಲೆ ಕೂತು ಕಾಯುತ್ತೇನೆಯೆಂದರೆ ಒಲ್ಲೆ. ಅಬ್ಬ ಎಂಥಾ ಕೆಂಪು ಜೊತೆಗೆ ಬಿಳಿಚುಕ್ಕೆ ಬೇರೆ ಯಾರೋಬಿಡಿಸಿದಂತೆ. ಗಾತ್ರ ಮಾತ್ರ ಹೆಬ್ಬೆರಳಿಗಿಂತ ಸ್ವಲ್ಪ ದೊಡ್ಡ... ತೀರಸೂಕ್ಷ್ಮ ಸ್ವಲ್ಪ ಸುಳಿವಾದರೆ ಒಟ್ಟೊಟ್ಟಿಗೆ ಪುರ್.... ತಿನ್ನಲು ಹುಲ್ಲು ಇತ್ಯಾದಿ ಬೀಜಗಳು, ಬೀಜ ಪ್ರಸರಣದಲ್ಲಿ ಪ್ರಮುಖಪಾತ್ರ....ಈ ನೆತ್ತರುಕುಡಿದ ಕೆಂಪು ಸಂತಾನೋತ್ಪತ್ತಿ ಕಾಲದಲ್ಲಿ ಮಾತ್ರ.. "ಕೆಂಪಾದವೋ ಎಲ್ಲ ಕೆಂಪಾದವೋ, ರೆಕ್ಕೆಪುಕ್ಕಗಳೆಲ್ಲಾ ಕೆಂಪಾದವೋ ಈ ಎಲ್ಲಿಂದಲೋ ಬಂದವರಿಗೆ....

ನಾಲ್ಕು ವರ್ಷ ಕಾಯಬೇಕಾಯಿತು ಈ ಫೋಟೊತೆಗೆಯಲು..

Tuesday 23 August 2016

Garganey

ಭಾರತದ ಪಕ್ಷಿ ವೀಕ್ಷಕರಲ್ಲಿ ಚಳಿಗಾಲ ಬಂತೆಂದರೆ ಏನೋಒಂದು ರೀತಿಯ ಕಾತುರ - ಈಬಾರಿಯೇನು ಹೊಸ ಪಕ್ಷಿ ನೋಡಬಹುದು, ಯಾವ ಜಕ್ಪಾಟ್ ಲಾಟರಿ, ಹೇಗೆ ವಿಂಟರ್ ಬರ್ಡಿಂಗ್ ಪ್ಲ್ಯಾನ್ಮಾಡೋದು, ಟಾರ್ಗೆಟ್ ಸ್ಪೀಷೀಸ್ ಯಾವುದು, ಯಾವ ಪಕ್ಷಿ ಬರಬಹುದು ಅಥವ ಪ್ರತೀಬಾರಿ ಬರಬೇಕಾದ ಖಗರತ್ನಗಳು ಈಬಾರಿ ಕಂಡಿಲ್ಲಾಂದ್ರೆ ಏನೋ ಕಳೆದುಕೊಂಡಂತೆ ಆತಂಕ, ಬಾರದಿದ್ದಕ್ಕೆ ಕಾರಣ ಹುಡುಕೊ ಪ್ರಯತ್ನ, ಚರ್ಚೆ.... ಇತ್ಯಾದಿ...

ಬಿಳಿಹುಬ್ಬಿನ ಬಾತುಗಳು (Garganey), ಚಲಕು ಬಾತುಗಳು (Northern shovelar) ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿನ ಕೆರೆಗಳಲ್ಲಿ ಕಾಣುತ್ತಿದ್ದು ಒಂದೆರಡದು ವರ್ಷಗಳಿಂದ ಹಠಾತ್ತನೆ ಕಡಿಮೆಯಾಗಿ ಚರ್ಚೆಯ ಅಧಿಕೇಂದ್ರವಾಗಿಬಿಟ್ಟಿತ್ತು.... ವಲಸಿಗ ಹಕ್ಕಿಗಳು ಬಂದಿಲ್ಲವೆಂದರೆ ಕೆಲವು ಗಂಭೀರ ಕಾರಣಗಳಿರಬಹುದು - ಹವಮಾನ ವೈಪರಿತ್ಯ, ಮಾಲಿನ್ಯದಿಂದ ಹಿಡಿದು ಕಗ್ಗಂಟಾಗಿರುವ ಹವಾಮಾನ ಬದಲಾವಣೆ, ವಾತಾವರ್ಣದ ತಾಪಮಾನ ಏರಿಕೆಯಂತಹ ಕಾರಣಗಳಿರಬಹುದು.... ಹಕ್ಕಿ ವಲಸೆಯ ಉನ್ನತ ಅಧ್ಯಯನದಿಂದ ಪ್ರಕೃತಿಯಲ್ಲಿನ ಬದಲಾವಣೆಗಳ ಸೂಚನೆಯಜಾಡುಗಳನ್ನು ಹಿಡಿಯಬಹುದು...

ಬಿಳಿಹುಬ್ಬಿನ ಬಾತುಗಳು (Garganey), ಚಲಕು ಬಾತುಗಳು (Northern shovelar) ಒಟ್ಟೊಟ್ಟಿಗೆ ಸಾವಿರಾರು ಮೈಲು ದೂರದ ದೇಶಗಳಿಂದ ಖಂಡಾಂತರ ವಲಸೆ ಬರುವುದು... ಸಾವಿರಾರು ಸಂಖ್ಯೆಯಾಲ್ಲಿ ಬೆರೆತು ತಮ್ಮ ವಲಸೆ ಆರಂಭಿಸುವ ಈ ಸ್ನೇಹಜೀವಿಗಳು ನಮ್ಮವರು ತಮ್ಮವರು ಭೇಧಭಾವ ಪಕ್ಕಕ್ಕಿಟ್ಟು ಆಪ್ರದೇಶದ ನಿವಾಸಿಗ ಹಕ್ಕಿಗಳೊಡನೆ ಬೆರೆತು ಮತ್ತೆ ತಮ್ಮ ದೇಶಗಳಿಗೆ ಮರಳುತ್ತವೆ... ಹೀಗೆ ಬಹುಸಂಖ್ಯೆಯಲ್ಲಿ ವಲಸೆ ಆರಂಭಿಸುವಮುನ್ನ ಕಳೆದವರ್ಷ ಎಲೆಮಲ್ಲಪ್ಪಶೆಟ್ಟಿಕೆರೆಯಲ್ಲಿ ಸೆರೆಸಿಕ್ಕಿದ್ದು........

Monday 8 August 2016

Red Rumped Swallow

Nature's Mosquito Control - Swallows are acrobat specialist....

Birds needs lot of energy for their survival and almost 90% of what they eat will get efficiently converted into energy for them to fly and be so active all day.... Swallows can be seen in open fields with small to large water bodies - they almost eat flying insects equivalent to their body weight per day....