Showing posts with label Mongoose. Show all posts
Showing posts with label Mongoose. Show all posts

Sunday, 17 January 2016

Indian Grey Mongoose

Indian Grey Mangoose, 16.01.2016, Bangalore outskirts


ಸುಮಾರು ೨೫ ವರ್ಷನೀರೇ ಕಾಣದೆ ಪಾಳುಬಿದ್ದಿರುವ ಕೆರೆ ಕಟ್ಟೆ ಮೇಲೆ ಹಕ್ಕಿಗಳಿಗೆ ಕಾದು ಕುಳಿತಿದ್ದಾಗ ಹಠಾತ್ತನೆ ಪೊದೆಯೊಳಗಿಂದ ಬಂದ ಮುಂಗುಸಿ ಪಂಚತಂತ್ರ ಕಥೆ ಆಧಾರಿತ ರಾಮ ಲಕ್ಷ್ಮಣ ಚಿತ್ರದ "ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು" ಹಾಡಿನ ಜೀವನ ಪಾಠ ಪುನಃ ನೆನಪಿಸಿ, ಒಮ್ಮೆ ನನ್ನನ್ನು ನೋಡಿ ಮುಂದೆ ಹೋಯಿತು. ಕ್ಯಾಮರ ಫೋಕಸ್ ಮಾಡುವಸ್ಟರಲ್ಲಿ ಪೊದೆ ಸೇರಿಯೇ ಬಿಟ್ಟತು.


ಸಂಜೆ ಸುಮಾರು ಐದುವರೆ ಇರಬಹುದು, ಮತ್ತೆ ಮುಂಗುಸಿ ಹಿಂತಿರುಗಿ ಬರಬಹುದೆಂಬ ನಿರೀಕ್ಷೆಯಿಂದ ಅಲ್ಲೆ ಅಲುಗಾಡದೆ ಕುಳಿತೆ, ಸುಮಾರು ನಾಲೈದು ತರದ ಹಕ್ಕಿಗಳು ಸುತ್ತ ಕುಳಿತು ತಮ್ಮಕೆಲಸದಲ್ಲಿ ನಿರತವಾದವು. ಸೂರಕ್ಕಿ ಸುಮಾರು ಹೊತ್ತು ಕ್ಯಾಮರಾಗೆ ಪೋಸು ಕೊಡುತ್ತಿದೆಯೇನೋ ಎಂಬಂತೆ ದುರುಗುಟ್ಟಿಸಿ ನನ್ನನ್ನೇ ನೋಡುತ್ತಿತ್ತು. ಹಕ್ಕಿಗಳನ್ನು ನೋಡುತ್ತಾ ಸುಮಾರು ಒಂದು ತಾಸು ಹೇಗೆ ಕಳಿಯಿತೋ, ನನಗಂತು ಒಂದು ನಿಮಿಶದಂತೆ ಭಾಸ. ಗಡಿಯಾರದ ಮುಳ್ಳು ಇರ್ಲಿಲ್ಲ, ಮೊಬೈಲ್ ಡಿಜಿಟ್ಸ್ ಆರುವರೆಯಾಯಿತು ಏಳೂ ಅನ್ನುತಿತ್ತು, ಸೂರ್ಯ ಆಗತಾನೆ ಮುಳುಗಿದ್ದ. ಇನ್ನೇನು ಕ್ಯಾಮರಾ ಪ್ಯಾಕ್ ಮಾಡ್ಬೇಕು, ನಿರೀಕ್ಷೆಯಂತೆ ಮುಂಗುಸಿ ಅದೇದಾರಿಯಲ್ಲಿ ಬಂದು ಹಾಗೆ ಒಂದು ಕ್ಷಣ ನನ್ನಕಡೆ ನೋಡಿ ಪೊದೆ ಸೇರಿತು. ಕ್ಯಾಮರ ರೆಡಿ ಇತ್ತು, ಫೋಟೊಗೆ ಸಿಕ್ತು.


ಆಮೇಲೆ, ಮುಂಗುಸಿ ಹಾವಿನ ಕಡಿತಕ್ಕೆ ಅಥವಾ ವಿಷಕ್ಕೆ ಪ್ರತಿರಕ್ಷಣೆ (immune) ಹೊಂದಿದ್ದು, ಹಾವುಗಳಿಗೆ ಆಜನ್ಮ ವೈರಿಗಳ ಪೈಕಿ ಒಂದು.