Thursday 11 February 2016

White stork

White Stork, ಬಿಳಿ ಕೊಕ್ಕರೆ 07.02.2016, ಹೊಸಕೋಟೆ

ಹಕ್ಕಿಗಳ ವಲಸೆ ಪ್ರಕೃತಿಯ ವಿಸ್ಮಯಗಳಲ್ಲಿ ಒಂದು, ನಮಗಂತು GPS ಇಲ್ಲ್ದೆ ಪಕ್ಕದ ಊರಿಗೆ ಹೋಗಿಬರಲು ಕಸ್ಟ. ಆದರೆ ಈ ಹಕ್ಕಿಗಳು ಸಾವಿರಾರು ಮೈಲುಗಳು ಕ್ರಮಿಸಿ ನಿರ್ದಿಷ್ಟ ಜಾಗಕ್ಕೆ ತಲುಪಿ ಕೆಲವು ದಿನ, ತಿಂಗಳುಗಳು ಕಳೆದು ಪುನಃ ಹಿಂತಿರುಗಿ ಬಂದ ಜಾಗ ತಲುಪುತ್ತದೆ! ಪ್ರತಿ ವರ್ಷ ಹಕ್ಕಿಗಳು ವಲಸೆ ಹೋಗುವುದುಂಟು, ಮುಖ್ಯ ಕಾರಣ ಶೀತಪ್ರದೇಶದ ಅತೀವ ಚಳಿ, ಚಳಿಕಾರಣ ಬೇಟೆ ಮತ್ತು ಆಹಾರದ ಕೊರತೆ ಹಾಗು ಸಂತಾನೋತ್ಪತ್ತಿ. ಮಾಡು ಇಲ್ಲವೆ ಮಡಿ, ವಲಸೆ ಹೋಗದೆ ಬೇರೆ ದಾರಿಯೇ ಇಲ್ಲ ಈನಮ್ಮ ಸ್ನೇಹಿತರಿಗೆ. ತಮ್ಮ ಪ್ರಾಣ ಪಣಕ್ಕಿಟ್ಟು ಸಾವಿರಾರು ಮೈಲು ವಲಸೆ ಬರುವ ಈ ಅತಿಥಿಗಳಿಗೆ ತೊಂದರೆ ಕೊಡದೆ ಇದ್ದರೆ ನಮ್ಮಿಂದಾಗುವ ಮಹಾಉಪಯೋಗ.
---------

ಬಿಳಿ ಕೊಕ್ಕರೆ, ಸತತ ನಾಲ್ಕನೇ ಸಾಲು ನಾ ಕಂಡಂತೆ ಹೊಸಕೋಟೆ ಕೆರೆಗೆ ಬರುತ್ತಿರುವುದು. ಸುಮಾರು ಫೆಬ್ರವರಿ ಮೊದಲವಾರ ಬಂದಿಳಿಯುತ್ತದೆ. ಬಿಳಿಕೊಕ್ಕರೆಗಳು ನಮಗೆ ಕೊಂಚ ಅಪರೂಪದ ಹಕ್ಕಿಗಳು. ಬಹುಶಃ ಬೆಂಗಳೂರು ಸುತ್ತಮುತ್ತ ಹೊಸಕೋಟೆ ಕೆರೆಯಲ್ಲಿ ಮಾತ್ರ ಫೆಬ್ರವರಿ ತಿಂಗಳಲ್ಲಿ ಕಾಣಬಹುದು. ಇಲ್ಲಿ ಸಾಮಾನ್ಯವಾಗಿ ಸಿಗುವ ಬಣ್ಣದ ಕೊಕ್ಕರೆಗಿಂತ ಒಂದು ಸೈಜು ದೊಡ್ಡದು. ಬಿಳಿ ಕೊಕ್ಕರೆ ದಕ್ಷಿಣ ಭಾರತಕ್ಕೆ ದೂರದ ಮಧ್ಯ ಏಶಿಯ ಪ್ರಾಂತ್ಯ ಅಥವ ಯೂರೋಪ್ನಿಂದ ವಲಸೆ ಬಂದು ಹೋಗುತ್ತದೆ. ಯಾವ GPS ಯಾವ air traffic control, ಯಾವ ವಿಸ ಪಾಸ್ಪೋರ್ಟ್? ಎಲ್ಲಾ ದೇಶವಿದೇಶ ಪೂರ್ತಿ ಭೂಮಿ ಇದರದ್ದೆ!!

Show Comments: OR

No comments:

Post a Comment